18 July, 2012

ಪ್ರೀತಿಯ ಹೆಸರಿಡಲೇನು.....



ಅಂತರಂಗದ ಈ ಭಾವಕೆ ಒಲವೆಂದು ಹೆಸರಿಡಲೇನು...
ಈ ಮುಗ್ಧ ಮನಸಿನ ಕನಸನು ಪ್ರೀತಿಯೆಂದೆನಲೇನು...
ಭಾವನೆಯು ನನ್ನದು,ಭಾವವದು ನಿನ್ನದೇ,
ಕನಸುಗಳು ನನ್ನವು ಸ್ಪೂರ್ತಿಯ ಸೆಲೆಯದುವೆ ನಿನ್ನದು.
ಬಾನು ನೀನು ಭೂಮಿ ನಾನು ಆ ದಿನ,
ನೀನೇ ನಾನು,ನಾನೇ ನೀನು ಅನ್ನೋ ಭಾವ ಈ ಕ್ಷಣ,
ಗುಪ್ತಗಾಮಿನಿ ನೀನು ನನ್ನ ಹೃದಯಾಂತರಾಳದಲ್ಲಿ,
ಸುಪ್ತಗಾಮಿನಿ ನೀ ಎನ್ನ ಮನಸ ಪುಟದಲ್ಲಿ.
ಪ್ರೀತಿ-ಸ್ನೇಹಕೆ ಇಂದು ಹೊಸ ಭಾಷ್ಯವು ನೀನು,
ಜನ್ಮಜನ್ಮದ ಕನಸಿಗೆ ಸಾಕಾರವೂ ನೀನು,
ಈ ಒಲವಿಗೆ ಪ್ರೀತಿಯ ಹೆಸರಿಡಲೇನು,
ಪದಗಳಿಗೆ ಪದವಿಟ್ಟು
ಹೊಸ ಆಸೆಯ ಬರೆಯಲೇನು...
ಕನಸಿನ ಬದುಕಿಗೆ ಪ್ರೀತಿಯ ಕನ್ನಡಿ ಹಿಡಿಯಲೇನು,
ಬಾಳಿನ ಪಯಣದಿ ಹೆಜ್ಜೆಗೆ ಹೆಜ್ಜೆಯಿಟ್ಟು ಜೊತೆಯಾಗುವೆ ನಾನು...

No comments:

Post a Comment