ಹಸುರ ಸಿರಿಯ ಬೆಚ್ಚಗೆ ಹೊದ್ದು ಮಲಗಿರುವ ಭೂರಮೆ,
ಹೊತ್ತು ನೆತ್ತಿಗೇರಿದರೂ ಚೈತನ್ಯವಿಲ್ಲದ ನೇಸರ,
ನೀಲ ಮೇಘಗಳ ಕರಗಿಸಿ ಬಿಳುಪಾದ ಬಾನು,
ವೇಗವ ಮರೆತು ಬೀಸುತ್ತಿರುವ ಆ ವಾಯು,
ಹಕ್ಕಿಗಳ ಕಲರವದ ಸಂಗೀತವೂ ಇಲ್ಲದ ಸ್ಮಶಾನ ಮೌನ,
ಜಡಗಟ್ಟಿದ ಸೃಷ್ಟಿಯ ಸಂಕೇತವೋ..
ಮಡುಗಟ್ಟಿದ ಮನಸಿನ ಭಾವಾಂತರಂಗ ಸಮ್ಮಿಲನವೋ...
ತಣ್ಣಗಾಗಿದೆ ಯಾಕೋ ಇಂದು ಮನಸಿನಲೆಗಳ ಕೊರೆತ,
ಯೋಚನಾಲಹರಿಯ ಸುನಾಮಿಯ ಭೊರ್ಗರೆತದ ಭಯವೂ ಇಲ್ಲದೆ,
ನಾಳೆಗಳ ದೋಣಿಯ ಸಂಚಾರಕೆ ಸುಗಮವಾದಂತಿದೆ ಹಾದಿ,
ಕನಸಿನೂರಿನ ಪಯಣ ಬಿಡದೆ ಸಾಗಬೇಕಿದೆ ಇಲ್ಲಿ ಯಾವ ಹಂಗೂ ಇಲ್ಲದೇ...
No comments:
Post a Comment