19 July, 2012

ನಿನ್ನ ಮನಸಾಗಲೇನು....

ನನ್ನ ಕಲ್ಪನೆ ನೀನು
ನಿನ್ನ ಮನಸಾಗಲೇನು,
ಭಾವ ಮಂದಿರಕೆ ಭಾವ ಲಹರಿಯಾಗಲೇನು?

ನನ್ನ ಪ್ರೀತಿಯು ನೀನು
ನಿನ್ನ ಉಸಿರಾಗಲೇನು,
ಪ್ರತಿ ಉಸಿರಲ್ಲೂ ನಿನ್ನ ಬಿಗಿದಪ್ಪಿಕೊಳಲೇನು?

ಎದೆ ಬಡಿತವು ನೀನು
ಪ್ರತಿ ತುಡಿತವು ನೀನು,
ನಿನ್ನ ಭಾವಂತರಂಗದಲಿ ಬಂದಿಯಾಗಲೇನು?

ಸುಖಾನೋ, ದುಖಃನೋ
ನಿನ್ನ ಜೀವನವಾಗಲೇನು,
ಜೀವನವಿರೋ ತನಕ ಅಳಿಯದ ಪ್ರೀತಿಯ ನೀಡಲೇನು?...

No comments:

Post a Comment