19 July, 2012

ಏಕಾಂಗಿಯಲ್ಲ....


ಒಂಟಿತನವ ಪ್ರೀತಿಸಿದ್ದೆ,
ಬಯಕೆಗಳಿಗೆ ಕಡಿವಾಣ ಹಾಕಿದ್ದೆ,
ನೆನಪುಗಳಿಗೂ ಬೇಲಿ ಹಾಕಿದ್ದೆ,
ಕನಸುಗಳ ಹೊಸ ಚಿತ್ತಾರ ಬಿಡಿಸಿದ್ದೆ ಬದುಕ ಪುಟದಲಿ,
ಶೂನ್ಯವಾದರೂ ಸರಿ ನೂರರಲ್ಲೊಂದಾಗಬಾರದೆಂದಿದ್ದೆ,
ಈ ಏಕಾಂಗಿಯ ತಪಸ್ಸನ್ನೆ ಹಾಳುಗೆಡವಿದೆಯಲ್ಲೆ ಹುಡುಗಿ ನೀನು ಕ್ಷಣ ಮಾತ್ರದಲ್ಲಿ...

ಕಡಿವಾಣ ಹಾಕಿದ್ದ ಬಯಕೆಗಳಿಂದು ಮೇರೆಮೀರಿವೆ,
ಬೇಲಿ ಹಾಕಿದ್ದ ನೆನಪುಗಳಿಂದು ನನ್ನನೇ ಮೇಯುತಿವೆ,
ಸೋತೆನಾ ಬದುಕಿನ ಪಂದ್ಯದಿ,ಪ್ರೀತಿಯ ಆಟದಿ,
ಗೆದ್ದು ಬೀಗುತಿರುವೆಯಲ್ಲೇ ನೀನು ಮರೆಯಾಗಿ ನಿಂತು...

ನಾನೀಗ ಏಕಾಂಗಿಯಲ್ಲ,ಭಾವನೆಗಳು ನನ್ನವಲ್ಲ ಹುಡುಗಿ,
ಆದರೂ ಸುಂದರ ಬದುಕಿನ ಕನಸು ಮಾತ್ರ ನನ್ನದೇ,
ಅದಕೆ ರೂಪುರೇಷೆ ನೀಡಬೇಕು ನೀನೀಗಲೇ...


No comments:

Post a Comment