19 July, 2012

**ಹೃದಯವೀಣೆ**



ಮೌನಿ ಹೃದಯ ಮಾತಾಡಿದಾಗ ನೂರು ಭಾವ ಚೆಲ್ಲಿತು,
ನೆನಪಿನ ಮೂಟೆಯದು ಹಿರಿದಾಗಿದೆ,
ಭಾವನೆಗಳು ಬತ್ತಲಾರವು ಇಲ್ಲೆಂದು.

ನೂರು ನೆನಪು,ಹತ್ತಾರು ಕನಸು ನಾಳೆಯೆಂಬ ಆಗಸದ ಹೊಳಪು,
ಕನಸಿನ ನಡುವೆಯೂ ಕಾಡೋ ನೆನಪುಗಳ ಕಲರವ,
ಕಹಿಯಾದರೂ ಸರಿ ಸಿಹಿಯಾದರೂ ಸರಿ ಇರುವುದೊಂದೆ ಉತ್ತರವು ತುಟಿಯಂಚಿನ ಮುಗುಳುನಗೆ.

ಪ್ರೀತಿಯಿದೆಯಿಲ್ಲಿ, ಸ್ನೇಹವಿದೆಯಲ್ಲಿ ಭಾವನೆಗಳ ಭರಪೂರ ಭಂಡಾರವೂ,
ಕುಗ್ಗದೆಂದಿಗು ಮನವು ಹಿಗ್ಗಿ ಹಿರಿದಾಗದು,
ನೋವುಗಳೆಲ್ಲ ನೋವುಗಳಲ್ಲ ಜೀವನದ ಪಾಠಗಳು,
ನಲಿವಿದು ಖುಷಿಯ ಕ್ಷಣವಲ್ಲ ಜೀವನದ ಜವಾಬ್ದಾರಿಯಿದು.

ಓಡುತ್ತಿರುವ ಕಾಲನ ಜೊತೆಗೆ ಕನಸಿನ ಪಯಣ,
ನಾಳೆಗಳ ನಾಳೆಯಲಿ ಉತ್ತರ ಹುಡುಕುವ ಯೋಚನೆ,
ಓಡೋ ಕಾಲಕೆ ಸಮನಾಗೊ ಹಂಬಲ,
ಕಾಲದ ಓಟದ ಜೊತೆಗೆ ಮರೆಯಲೇ ನಡೆದಿದೆ ಜೀವನ ನಿತ್ಯನೂತನ...

No comments:

Post a Comment