ನೆನಪಿನಾಳಕ್ಕಿಳಿದರೆ ಕಣ್ಣೀರಧಾರೆ,
ಮುಗ್ಧ ಮನಸಿನ ಮೂಲೆ ಮೂಲೆಯಲೂ ಕಾಡುವ ನೂರು ಭಾವ,
ನಾಳೆಯದು ಹೇಗಿರುವುದೋ ಅನ್ನೊ ದುಗುಡ,
ನಿನ್ನೆಯನು ನೆನೆದು ಮೂಡೋ ಬೆವರ ಸಾಲು,
ಖುಷಿಯ ಜೊತೆಗೂ ಕಣ್ಣೀರ ಸಿಂಚನ,
ನೋವಿನ ಜೊತೆಗಿಷ್ಟು ಅಶ್ರುತರ್ಪಣ,
ನಿನ್ನೆಯದು ಭೂತವಾದರೆ ನಾಳೆಯದು ಬೇತಾಳದಂತೆ,
ಸತ್ತು ಹುಟ್ಟುವ ಮತ್ತೊಂದು ನೋವು,
ನೂರು ಕನಸುಗಳಿಗಿಲ್ಲಿಉತ್ತರ ಹುಡುಕುವ ಚಪಲ,
ನಿನ್ನೆ-ನಾಳೆಗಳ,ಭೂತ- ಭವಿಷ್ಯದ ಜೊತೆಗೆ ಇಂದು ಎಂಬುದು ಹಾಳು,
ಮನಸ್ಸಿನಾಟಕ್ಕಿಂದು ಕನಸುಗಳ ಲಗಾಮು,
ಗೋರಿ ಸೇರಿದ ಅದೆಷ್ಟೋ ಕನಸುಗಳಿಗಿಲ್ಲಿ ಮುಕ್ತಿ ನೀಡಬೇಕಿದೆಯಿಂದು,
ಪ್ರಶ್ನೆಗಳಿಗೆ ಪ್ರಶ್ನೆಗಳೇ ಉತ್ತರದಂತಿದೆ ಇಂದು,
ಪ್ರತಿ ಪದಗಳಿಗೂ ಅರ್ಥ ಹುಡುಕುವ ಕಾತರ ನಾಳೆಯದು ಬರುವ ಮುನ್ನ ಇಂದೆಂಬುದು ಕಳೆಯೋ ಮುನ್ನ...
No comments:
Post a Comment