18 July, 2012

**ಒಲವಿನ ತೇರು**



ಮರಳ ಮೇಲೆ ಬರೆದೆ ಹುಡುಗಿ ನಾನು ನಿನ್ನ ಹೆಸರ,
ಅಲೆಗಳವು ಕರಗಿಸಿದವು ನನ್ನ ಕೈಯ ಬರಹ...

ಕಲ್ಲ ಮೇಲೆ ಬರೆದುಬಿಟ್ಟೆ ನಾನು ನಿನ್ನ ಹೆಸರ,
ಮಳೆಯು ಸುರಿದು ಕರಗಿಸಿತ್ತು ಅಲ್ಲೂ ನಿನ್ನ ಹೆಸರ...

ಬಿಡದೆ ಛಲವ ಬರೆದೇಬಿಟ್ಟೆ ನನ್ನ ಹೃದಯದಲ್ಲಿಯೇ,
ಒಲವ ಬಿಡದ ಹುಡುಗ ನಿನಗೆ ತಥಾಸ್ತು ಎಂದ ವಿಧಾತನೇ...

ಕಾಯುತಿರುವೆ ಹುಡುಗಿ ಇಂದು ನಾನು ನಿನ್ನ ಒಲವ ಸಮ್ಮತಿಗೆ,
ಹೃದಯದ ಬಾಗಿಲಿದು ತೆರೆದೇ ಇಹುದು ಬಂದುಬಿಡು ನೀನಲ್ಲಿಗೆ.

ಪ್ರೀತಿಯಿದೆ,ಪ್ರೇಮವಿದೆ ಒಲವು ಕೂಡ ನಿನ್ನದಾಗಿದೆ,
ಮರೆತು ಕೂಡ ಮರೆಯಬೇಡ ಜೀವವಿದು ಕಾತರಿಸಿದೆ...

ಬೇಗ ಬಂದು ಸೇರಿಬಿಡು ಈ ಹೃದಯದೂರಿಗೆ,
ಜೊತೆಯಾಗಿ ಹೆಜ್ಜೆಯಿಟ್ಟು ಮುಂದುವರಿಸು ಈ ಒಲವ ಯಾತ್ರೆಯಾ...

ಜೀವನ ಜಾತ್ರೆಯಲಿ ನೀನೆ ನಾನು,ನಾನೇ ನೀನು ಅನ್ನೋ ಭಾವ ಮೂಡಿದೆ,
ತಡವೇಕೆ ಗೆಳತಿ ಒಲವ ಮನ್ನಿಸಿ ಮನಸ ಬೆರೆಸಿ ಜೊತೆಯಾಗು ಈ ಪ್ರೇಮ ರಥ ಯಾತ್ರೆಗೆ...

No comments:

Post a Comment