ಮನಸಿಂದು ತೊಳಲಾಡಿದೆ ಏನೂ ಹೇಳಲಾಗದೆ,
ಕನಸಿಂದು ಮಂಕಾಗಿದೆ ಮಾತನಾಡಲಾಗದೆ,
ಹಿಡಿದಂತಿದೆ ಗ್ರಹಣ ಈ ಮನೋತೇಜಗೆ,
ಆದರೂ ಏನೋ ಹಂಬಲ ಕನಸ ಕಾಣಬೇಕಿದೆ,
ಕನಸಿಗ್ಯಾವ ಬೇಲಿಯಿದೆ ಸುಮ್ಮನಿರೋಕೆ,
ಮನಸಿಗೇನೊ ತನ್ನದೇ ಲಕ್ಷಣರೇಖೆಯೊಂದಿದೆ,
ಮೇರೆಮೀರೊ ಮನಸಿಗೊಂದು ಪ್ರೀತಿಯ ಲಗಾಮು ಇದೆ,
ಆದರಿಲ್ಲಿ ಕನಸಿಗ್ಯಾರ ಭಯವೂಇಲ್ಲವೇ...
ನನ್ನ ಕನಸು ನನ್ನದು ಎಂದಿನಂತೆಯೇ,
ಅದರ ಹುಚ್ಚುಲೋಕಕೆ ಕೊನೆಯು ಇಲ್ಲದೆ...
ನಾಳೆಯಿದು ಯಾರದೋ ತಿಳಿಯದಂತಿದೆ,
ಬೇಕು ಎಂಬ ಆಸೆಗೆ ಕೊನೆಯೇ ಇಲ್ಲವೇ...
ಕಾಲವಿದು ಬದಲಾದರೂ ಕನಸಿಗೆಲ್ಲಿ ಕೊನೆಯಿದೆ?
ಕನಸುಗಾರ ನಾನು ಹುಚ್ಚುಹುಡುಗನಂತೆಯೇ,
ಕನಸು ಕಾಣೋ ಹುಡುಗ ಇಂದು ನೀನು ಪ್ರೇಮಿಯೇ...
No comments:
Post a Comment