19 July, 2012

ನೆನಪಾಗಿ....

ಮರೆಯಬೇಕು ಎಂದಾಗಲೆಲ್ಲ ನೆನಪಾಗಿ ನನ್ನ ಸುತ್ತ ಸುಳಿದಾಡುವೆಯಲ್ಲೇ ಹುಡುಗಿ,
ದೂರದಿ ನಿಂತು ನಸುನಕ್ಕು ಬಲೆಯ ಬೀಸಬಂದೆಯಲ್ಲೆ,
ಬೇಡವೆಂದರೂ ಕೇಳದೀ ಹುಚ್ಚು ಮನವು,
ನನ್ನ ಮನಸ ಕದಿಯಲು ಬಂದ ಚಿತ್ತ ಚೋರಿ ನೀನು,
ಈ ಮನಸಿನಾಳವ ತಿಳಿಯಲಾರೆ ನೀನು ನೆನಪಾಗೆ ಇದ್ದುಬಿಡು ನೆನಪಿನಾಳದಲ್ಲೇ, ಕನಸಲ್ಲೂ ಕಾಡುತಿರುವೆಯಲ್ಲೇ,
ಕನಸೆಂದೂ ನನ್ನದು ಹುಡುಗಿ ಕಾಡಬೇಡ ನೀನಲ್ಲಿ ಬಂದು,
ಕನಸಿಗೂ ಬೇಲಿ ಹಾಕಿರುವೆ ನಾನು ದಾಟಿ ಬರಲಾರೆ ನೀ ಅದನೆಂದೂ...

No comments:

Post a Comment