ಕಣ್ಣಲೇ ಸನ್ನೆ ಮಾಡಿ ನಿಂತ ನಿನ್ನ ನೋಟ ನನ್ನಾ ಮೋಡಿ ಮಾಡಿತ್ತೆ
ಗೆಳತಿ ಮನಸ ಸೆಳೆದಿತ್ತು,
ಮೌನಿ ನೀನು ಮಾತಾಡದೇನೇ ಮನಸ ಕದ್ದೆಯಲ್ಲೇ ಹುಡುಗಿ,
ಸಂಜೆ ಸುರಿದ ತುಂತುರು ಮಳೆಯಲ್ಲೂ ನಿನ್ನ ಪ್ರೀತಿಯ ಕಂಪಿತ್ತು ಗೆಳತಿ ,
ಮನಸೇಕೊ ಹುಚ್ಚು ಆಸೆಯಿಂದ ಗರಿಗೆದರಿ ಕುಣಿಯಲು ಅಣಿಯಾಗಿತ್ತು
ನಿನ್ನಾ ಅನುಪಸ್ಥಿತಿಯನರಿತು ವಿರಹ ಬೇಗೆಯಲಿ ಸುಮ್ಮನಾಗಿತ್ತು,
ನೀ ಜೊತೆಯಲಿ ಇಲ್ಲದಿದ್ದರೇನಂತೆ ಗೆಳತಿ
ನಿನ್ನ ಮುಗುಳು ನಗೆಯೇ ಸವಿ ನೆನಪಾಗಿ ನನ್ನ ಕಾಡುತಿರುವಾಗ,
ಕನಸಿನ ಲೋಕದಿಂದ ಈ ಮನಸಿನಾಳಕೆ ನೀ ಬಂದರೆ ಸಾಕೆನಗೆ.

No comments:
Post a Comment