19 July, 2012

ಕರಗಿ ಹೋಗಲೇ ನೆನಪಿನಲೆಗಳಲಿ...


ದಟ್ಟ ಕಾನನದ ನಡುವೆ ಸುಶ್ರಾವ್ಯ ಸ್ವರವೊಂದು ಕೇಳಿ ಬರುತ್ತಿದೆ ಗೆಳತಿ,
ನನಗನಿಸುತಿದೆ ಯಾಕೋ ಅದು ನಿನ್ನದೇ ಎಂದೂ,
ನೀ ಮತ್ತೆ ಬರಲಾರೆ ಎಂಬ ಕಟುಸತ್ಯ ತಿಳಿದಿದ್ದರೂ...

ಕಗ್ಗತ್ತಲ ಕಾರಿರುಳಿನಲಿ ಕರಗಿ ಬಿಡಬಲ್ಲೆ,
ಭೊರ್ಗರೆವ ಸಾಗರದಲೆಗಳ ನಡುವೆ ಮುಳುಗೇಳಬಲ್ಲೆ,
ಬೀಸೋ ಗಾಳಿಗೆ ತಡೆಯಾಗಬಲ್ಲೆ ಗೆಳತಿ...

ನಿನ್ನ ನೆನಪುಗಳ ಹೊರತಾಗಿ ಹೇಗೆ ಬಾಳಲೇ ಹುಡುಗಿ,
ಮತ್ತೆ ಎದ್ದಿದೆ ನಿನ್ನ ನೆನಪುಗಳ ಸುನಾಮಿ ನನ್ನಂತರಂಗದಲ್ಲಿ ಇದ್ದು ಬಾಳಲೇ ಇಲ್ಲ ಕರಗಿ ಹೋಗಲೇ ನೆನಪಿನಲೆಗಳಲಿ...


No comments:

Post a Comment