ಮೊದಲ ಹನಿ ಧರೆಯ ಸೋಕಿದ ತರದಿ,
ಮೊದಲ ಸುಖದ ಮತ್ತಿನಲ್ಲಿ ಮೈಮರೆತಳಾಕಿ ತರುಣಿ,
ನಾಳೆಯದು ಹೇಗೆಂಬ ಮಾತದು ಮಾಯೆಯಾಗಿತ್ತು,
ಜೊತೆಯಾದವನು ಯಾರೋ, ದೋಚಿದ್ದ ಶೀಲವ ಸುಖದ ಜೊತೆಗೆ,
ಕತ್ತಲೆಯ ನಡುವಿನ ಬೆತ್ತಲೆಯ ಆಟ ಜಗವ ಮರೆಸಿತ್ತು,
ಹೆಸರೇ ಇಲ್ಲದ ಉಸಿರೊಂದು ಬಸುರಾಗಿತ್ತು,
ಲೋಕದ ದೃಷ್ಟಿಯಲಿ ಆಕೆಯದು ನೀತಿಗೆಟ್ಟ ಬದುಕು,
ಹುಟ್ಟುವ ಮೊದಲೇ ಪಾಪ ಹೊತ್ತ ಬದುಕು ಆ ಭ್ರೂಣಕೆ,
ತಾಯಿ ಗರ್ಭದಲೇ ಆವರಿಸಿತ್ತು ಕಂಡವರ ಶಾಪ ಹಸುಗೂಸಿಗೆ,
ಯಾವುದೋ ಉಸಿರು ಜೊತೆಗಿಲ್ಲ ಹೆಸರು,
ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ಇದೂ ಒಂಥರಾ ಭಂಡ ಬಾಳು....
No comments:
Post a Comment